ದಿನಾಂಕ ೨೩.೨.೨೦೦೨೧ರಂದು ಕನ್ನಡಹಾಗೂ ವಾಣಿಜ್ಯ ವಿಭಾಗಗಳ ಸಹಯೋಗದಲ್ಲಿ  ಬಿ ಕಾಂ ೩ನೇ ಸೆಮಿಸ್ಟರ್ ನ ಕನ್ನಡ ಪಠ್ಯ ದ “ಶವದಮನೆ” ಚದುರಂಗರ ಕಥೆಯ ಕುರಿತು ಅತಿಥಿ ಉಪನ್ಯಾಸವನ್ನು ಏರ್ಪಸಲಾಗಿತ್ತು ಇದನ್ನು ಅಂತರ್ಜಾಲದಲ್ಲಿ ನಡೆಸಲಾಯಿತು.ರಾಣಿಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪದ್ಮಿನಿ ನಾಗರಾಜು ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು

ಪಾಠವನ್ನು ಹಲವಾರು ಮಜಲುಗಳಲ್ಲಿ ವಿಷ್ಲೇಶಣೆ ಮಾಡಿ ವಿವರಿಸಿದ ರೀತಿ ಆಕರ್ಷಕ ವಾಗಿತ್ತು.ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜ್ಯೋತಿ ಹೊಸೂರಕರ್ ಅವರು ಎಲ್ಲರನ್ನು ಸ್ವಾಗತಿಸಿದರು. ತಾಂತ್ರಿಕವಾಗಿ ಶ್ರೀ ಗೋಕುಲ್ ಹಾಗೂ ಶ್ರೀ ಡೇವಿಡ್ ಅವರು ಸಹಕಾರ ನೀಡಿದರು.ಬಿಕಾಂ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಶಿವಕುಮಾರ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.ಎರಡನೇ ಬಿಕಾಂ ನ ಕೊ ಆರ್ಡಿನೇಟರ್ ಪ್ರೊ.ಉಮೆಸಲ್ಮಾ  ಉಪನ್ಯಾಸ ದಲ್ಲಿ ಉಪಸ್ಥಿತರಿದ್ದರು.